ಬೆಂಗಳೂರು: ಈ ಗಾಗಲೇ ಬಿಜೆಪಿಯವರು ಸರಕಾರ ಇನ್ನೇನು ಬಿದ್ದೆ ಬಿಡ್ತು ಅಂತ ಪ್ರತಿಸಲ ಡೆಡ್ ಲೈನ್ ಕೊಡುತ್ತಾರೆ. ಶಿವರಾತ್ರಿಗೆ ಒಂದು ಡೆಡ್ ಲೈನ್ ಕೊಡುತ್ತಾರೆ ಅದೆಲ್ಲ ಸುಳ್ಳು ವದಂತಿ ಹಬ್ಬಿಸುತ್ತಾರೆ ಅಂತ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಯಡಿಯೂರಪ್ಪ ಹಾಗೂ ಇತರ ನಾಯಕರ ಸಂಕ್ರಾಂತಿಗೆ ಸರ್ಕಾರ ಬೀಳುತ್ತದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಸಂಕ್ರಾಂತಿಗೆ ಡೆಡ್ ಲೈನ್ ಕೊಟ್ಟಿದ್ದಾರೆ ನಂತರ ಶಿವರಾತ್ರಿಗೆ, ಯುಗಾದಿಗೆ ಒಂದು ಡೆಡ್ ಲೈನ್ ಕೊಡುತ್ತಾರೆ. ಅವರು ಹೇಳಿದ್ದು ಒಂದೂ ಆಗಲ್ಲ ಎಂದು ನಕ್ಕು ಬಿಟ್ಟರು ಕುಮಾರಸ್ವಾಮಿಯವರು.!