ಬೆಂಗಳೂರು: ಕಳೆದ ವಾರವಷ್ಟೇ ಲೊಕಸಭಾ ಚುನಾವಣೆಯವರಗೆ ಸರಕಾರ ಇರುತ್ತೆ ಅಂತ ಹೇಳಿದ್ದ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದ್ದು ನೆನಪಿರಬೇಕಲ್ಲಾ. ನಿನ್ನೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ನಂತರ ಆದ್ರೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮದವರೊಂದಿಗೆ ಏನಪ್ಪ ಹೇಳಿದ್ದಾರೆ ಅಂದ್ರೆ ಐದು ವರುಷ ನಮ್ಮ ಸರ್ಕಾರ ಇರೋದು ನಿಶ್ಚಿತ ಹೇಳಿದ್ದಾರೆ.

ಇದೇ ವೇಳೆ ಸರ್ಕಾರದ ಅಭದ್ರತೆ ಬಗ್ಗೆ ಯಾವ ಅನುಮಾನವೂ ಬೇಡ. ಎಲ್ಲಾ ಸಚಿವರು ತಮ್ಮ ಕೆಲಸಗಳನ್ನು ಶುರು ಮಾಡಿದ್ದಾರೆ ಮತ್ತು ವೈಜ್ಞಾನಿಕವಾಗಿ ರೈತರ ಸಾಲಮನ್ನಾ ಮಾಡಬೇಕು ಹಾಗಾಗಿ ಸ್ವಲ್ಪ ಸಮಯ ಬೇಕಾಗಿರುವುದು ಅನಿವಾರ್ಯ ಎಂದರು.