ಬೆಂಗಳೂರು : ಸಂಸ್ಕೃತ ಎಲ್ಲಾ ಭಾಷೆಗೂ ಮಾತೃಭಾಷೆ, ಅದನ್ನು ಪ್ರವರ್ಧಮಾನಕ್ಕೆ ತರಬೇಕು. ಹಾಗಾಗಿ ಉಳಿದ ಭಾಷೆಗಳಂತೆ ಇದನ್ನೂ ಕಡ್ಡಯವಾಗಿ ಮಕ್ಕಳಿಗೆ ಕಲಿಸಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದ್ದಾರೆ.

ಹಾಗಾಗಿ ಶಾಲಾ ಹಂತದಲ್ಲೇ ಈ ಭಾಷೆಯನ್ನು ಕಲಿಸಲು ಸೂಕ್ತ ವಿಧಾನಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಇಂದು ಮಠಮಂದಿರಗಳಲ್ಲಿ ಕೇವಲ ಬಡ ವಿದ್ಯಾರ್ಥಿಗಳಿಗೆ, ಬಡ ಕುಟುಂಬದ ಮಕ್ಕಳಿಗೆ ಮಾತ್ರ ಸಂಸ್ಕೃತವನ್ನು ಕಲಿಸಲಾಗುತ್ತದೆ. ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗಳಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಮಾತ್ರವಲ್ಲದೇ ಖಾಸಗಿ ಶಾಲೆಗಳಲ್ಲೂ ಸಂಸ್ಕೃತ ಕಡ್ಡಾಯ ಮಾಡಬೇಕು ಎಂದು ಹೇಳಿದ್ದಾರೆ.