ಬೆಂಗಳೂರು:  ಲಾಕ್‌ಡೌನ್ ಹಾಗೂ ಕೋವಿಡ್ ಭೀತಿಯಿಂದ ಪ್ರಯಾಣಿಕರಿಲ್ಲದ ಪರಿಣಾಮ ಸಂಕಷ್ಟದಲ್ಲಿದ್ದ ಬಸ್ ನಿಲ್ದಾಣಗಳ ವಾಣಿಜ್ಯ ಮಳಿಗೆಗಳ ಬಾಡಿಗೆ ಮನ್ನಾ ಹಾಗೂ ವಿನಾಯ್ತಿ ನೀಡುವ ಮೂಲಕ ಅಂಗಡಿಕಾರರ ಹಿತ ಚಿಂತನೆಗೆ ಹುಬ್ಬಳ್ಳಿ  ವಾಯುವ್ಯ ಸಾರಿಗೆ ಸಂಸ್ಥೆ ಮುಂದಾಗಿದೆ.

ಕಳೆದ ನಾಲ್ಕು ತಿಂಗಳ 7.15 ಕೋಟಿ ರೂ ಬಾಡಿಗೆ ಮನ್ನಾ ಮಾಡಿದೆ. ವ್ಯಾಪಾರಿಗಳ ಹಿತ ಚಿಂತನೆ ಕಾಪಾಡುವ ನಿಟ್ಟಿನಲ್ಲಿ ಸಂಸ್ಥೆ ವ್ಯಾಪ್ತಿಯಲ್ಲಿನ ಅಂಗಡಿ, ಕ್ಯಾಂಟೀನ್ ವ್ಯಾಪಾರಿಗಳಿಗೆ ಭಾರೀ ಪ್ರಮಾಣದಲ್ಲಿ ವಿನಾಯಿತಿ ನೀಡಿದೆ.!