ಬೆಂಗಳೂರು : ಸರಕಾರಿ ಬಸ್ ಪ್ರಯಾಣಿಕರಿಗೆ ಶಾಕ್ ಸುದ್ದಿ ಏನಪ್ಪ ಅಂದ್ರೆ ನಿತ್ಯ ಡಿಸೇಲ್ ದರ ಏರಿಕೆ ಆಗುತ್ತಿರುವುದರಿಂದ ಬಸ್ ಚಾರ್ಜ್ ಏರಿಕೆ ಮಾಡುವ ಚಿಂತನೆ ನಡೆಸಿದಯಂತೆ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಹೊರೆ ಆಗಲಾರಂಭಿಸಿದೆ.ಹಾಗಾಗಿ ಟಿಕೆಟ್ ದರ ಏರಿಕೆ ಬಗ್ಗೆ ಚರ್ಚೆ ಶುರುವಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆಯಂತೆ.

ಮಾರುಕಟ್ಟೆಯಲ್ಲಿ ಡೀಸೆಲ್ದರ ಪ್ರತಿ ಲೀಟರ್ ಗೆ 70.25 .ರೂ. ತಲುಪಿದೆ. ರಾಜ್ಯ ರಸ್ತೆ ಸಾರಿಗೆ ನಿಗಮಗಳು ನಿತ್ಯ ಲಕ್ಷಾಂತರ ಲೀಟರ್ ಡೀಸೆಲ್ ಬಳಸಿಕೊಳ್ಳುತ್ತಿವೆ. ಹೀಗಾಗಿ ತೈಲ ಕಂಪನಿಗಳಿಂದಲೆ ಟೆಂಡರ್ ಮೂಲಕ ಹೈ ಸ್ಪೀಡ್ ಡೀಸೆಲ್ ಸಗಟಾಗಿ ಖರೀದಿಸುತ್ತಿರುವ ನಿಗಮಗಳು ಪ್ರತಿ ಲೀಟರ್ ಗೆ 6 ರೂ. ಉಳಿಸುತ್ತೀವೆ. ನಿತ್ಯ ಡಿಸೇಲ್ ಏರಿಕೆ ಆಗುತ್ತಿರುವುದರಿಂದ ಇಷ್ಟರಲ್ಲಿಯೇ ಬಸ್ ದರ್ ಜಾಸ್ತಿ ಆಗಬಹುದು.