ಬೆಂಗಳೂರು: ಸರ್ಕಾರಿ ಹುದ್ದೆಯಲ್ಲಿದ್ದು ಮತ್ತೊಂದು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಎನ್‌ಒಸಿ ಪಡೆಯುವ ಹಳೆ ನಿಯಮಕ್ಕೆ ವಿನಾಯಿತಿ ಕಲ್ಪಿಸಲಾಗಿದೆ.!

ಸರ್ಕಾರಿ ಹುದ್ದೆಯಲ್ಲಿರುವವರು ಮತ್ತೊಂದು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ತಾವು ಕೆಲಸ ಮಾಡುತ್ತಿರುವ ಇಲಾಖೆಯಿಂದ ನಿರಪೇಕ್ಷಣಾ ಪತ್ರವನ್ನು ಪಡೆಯುವುದು ಕಡ್ಡಾಯವಾಗಿತ್ತು. ಈಗ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು ನೌಕರರು ಬೇರೆ ಇಲಾಖೆಯ ಹುದ್ದೆಗೆ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಆಯ್ಕೆಯಾದ ನಂತರವೂ ತಾವು ಕೆಲಸ ಮಾಡುತ್ತಿದ್ದ ಇಲಾಖೆ ಅಥವಾ ಸಚಿವಾಲಯದ ಮುಖ್ಯಸ್ಥರಿಂದ ನಿರಪೇಕ್ಷಣಾ ಪತ್ರ ಪಡೆಯಲು ಅವಕಾಶ ನೀಡಲಾಗಿದೆ.

ಈ ಕುರಿತಾದ ಹೊಸ ನಿಯಮ ಜಾರಿಗೆ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆ ಮಾಡಿದ 30 ದಿನದೊಳಗೆ ನಿರಪೇಕ್ಷಣಾ ಪತ್ರ ಕೊಡಬೇಕು. ನೌಕರರು ಆಶಿಸ್ತು ಕ್ರಮ ಎದುರಿಸುತ್ತಿದ್ದರೆ, ಕ್ರಿಮಿನಲ್ ಇಲಾಖೆ ವಿಚಾರಣೆಗೊಳಗಾಗಿದ್ದಲ್ಲಿ ಅಥವಾ ಇಲಾಖೆ ವಿಚಾರಣೆಗೆ ಒಳಪಟ್ಟಲ್ಲಿ ಅಂತಹ ವ್ಯಕ್ತಿಗಳಿಗೆ ನಿರಪೇಕ್ಷಣಾ ಪತ್ರ ಕೊಡಬಾರದು ಎಂದು ತಿಳಿದುಬಂದಿದೆ.