ಬೆಂಗಳೂರು: ಕೊರೋನಾ ಸೋಂಕಿಗೆ ಹೆದರಿ ಲಾಕ್ ಡೌನ್ ಹೇರಿದ್ದ ಪರಿಣಾಮ ಜನ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.

ಈ ಹಿನ್ನೆಲೆ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಹಲವು ರಾಜ್ಯ ಸರ್ಕಾರಗಳು ಪಡಿತರ ಚೀಟಿಯಿಂದ ವಂಚಿತರಾದ ಬಡವರಿಗೆ 1 ರೂ.ಗೆ ಒಂದು ಕೆಜಿ ಧಾನ್ಯ ವಿತರಿಸುವ ಯೋಜನೆ ಜಾರಿಗೊಳಿಸುತ್ತಿವೆ.

ಈ ಯೋಜನೆ ಈಗಾಗಲೇ ಹರಿಯಾಣದಲ್ಲಿ ಜಾರಿಯಲ್ಲಿದ್ದು, ನ.15ರಿಂದ ಜಾರ್ಖಂಡ್ ಸರ್ಕಾರವೂ ಜಾರಿಗೊಳಿಸಲಿದೆ. ರಾಜ್ಯ ಬಿಜೆಪಿ ಸರ್ಕಾರವೂ ಇದನ್ನು ಜಾರಿಗೆ ತಂದು ಹಸಿರು ಪಡಿತರ ಚೀಟಿ ವಿತರಿಸಲಿದೆ.