ಚಿತ್ರದುರ್ಗ: ಸಾಣಿಹಳ್ಳಿಯ ತರಳುಬಾಳು ಗುರುಪೀಠದ ಪಂಡಿತಾರಾದ್ಯ ಸ್ವಾಮೀಜಿ,ಸಮ್ಮಿಶ್ರ ಸರ್ಕಾರ ರಚನೆ ಬಗ್ಗೆ ಮಾತನಾಡಿದ ಅವರು ರಾಜ್ಯದ ಸದ್ಯದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಸರ್ಕಾರದಿಂದ ಅಭಿವೃದ್ಧಿ ಯಾಗುವ ವಿಶ್ವಾಸವಿಲ್ಲ ಎಂದಿದ್ದಾರೆ.

ಹೊತ್ತು ಬಂದಂತೆ ಕೊಡೆ ಹಿಡಿಯುವ ಸಂಸ್ಕೃತಿ ರಾಜ್ಯದ ರಾಜಕಾರಣಿಗಳಲ್ಲಿ ಬೆಳೆದಿದೆ. ಮತದಾರರು ಒಂದು ಪಕ್ಷಕ್ಕೆ ಬಹುಮತ ನೀಡಿದ್ದರೆ ಕುದುರೆ ವ್ಯಾಪರ,ಅನೈತಿಕ ಸಂಬಂಧ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಸರ್ಕಾರಕ್ಕೆ ಭವಿಷ್ಯವಿದೆಯೋ ಇಲ್ಲವೊ ಗೊತ್ತಿಲ್ಲ.ರಾಜ್ಯದ ಜನರಿಗಂತೂ ಭವಿಷ್ಯವಿಲ್ಲ. ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಹುದ್ದೆಯೇ ಇಲ್ಲ ಎಂದು ಹೇಳಿದ ಅವರು ರೈತರ ಸಾಲದ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ, ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲೇ ಹೇಳಿದ್ರು ಈಗ ಕುಮಾರಸ್ವಾಮಿ ನಾಲಿಗೆ ಹೊರಳುತ್ತಿದೆ ಎಂದರು.