ಹುಬ್ಬಳ್ಳಿ : ಮೈತ್ರಿ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಪತನವಾಗಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ ಜೊತೆಗೆ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ದೇವೇಗೌಡರು, ಸಿದ್ದರಾಮಯ್ಯನವರ ಹೇಳಿಕೆ ನೋಡಿದ್ರೇ, ದೋಸ್ತಿ ಅಭ್ಯರ್ಥಿಗಳು ಸೋಲುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿನ ಒಳಬೇಗುದಿ ಮತ್ತೆ ಹೊರಗೆ ಬರುತ್ತೆ ಹಾಗಾಗಿ ಯಾವ ಕ್ಷಣದಲ್ಲಾದರೂ ಮೈತ್ರಿ ಸರಕಾರ ಬಿಳುತ್ತದೆ ಎಂದು ಹೇಳಿದರು.