ಹುಬ್ಬಳ್ಳಿ:  ಸಮಿಶ್ರ ಸರಕಾರ ಯಾವುದೇ ಕ್ಷಣದಲ್ಲಿ ಪತನವಾಗಲಿದೆ ಸರಕಾರ ಅಲ್ಪಾಯುಷ್ಯ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರು ಅವರು ಭವಿಷ್ಯ ಹೇಳಿದ್ರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, ಜನಾದೇಶದ ವಿರುದ್ದ ಇರೋ ಸರ್ಕಾರ. ಕಾಂಗ್ರೆಸ್ ಶಾಸಕರು,ಹಾಗೂ ಸಚಿವರು ಗುದ್ದಾಟ ನಡೆಸಿದ್ದಾರೆ.ಜೆಡಿಎಸ್ ಜೊತೆ ಮೈತ್ರಿ‌ ಮಾಡಿಕೊಂಡು ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ನೀರಿನ ಮೇಲಿನ ಗುಳ್ಳಯಂತಿದೆ ಎಂದು ಹೇಳಿದರು.

ಮೊದಲಿಂದಲೂ ಹಿಟ್ ಅಂಡ್ ರನ್ ಹೇಳಿಕೆ ನೀಡುವುದು ಮಾಮೂಲಿ ಎಂದು ಕಿಂಗ್ ಪಿನ್ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿ ನಿಮ್ಮಲ್ಲಿ ಸಾಕ್ಷಿ ಇದ್ದರೆ ಕ್ರಮ ಕೈಗೊಳ್ಳಿ. ಅದು ಬಿಟ್ಟು ಹಿಟ್ ಅಂಡ್ ರನ್ ಹೇಳಿಕೆ ನೀಡಬೇಡಿ ಅಂತ ಹೇಳಿದ್ರು.