ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡೆನಯಾಗಿ ಸದನದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಈ ನಡುವೆ ಸಮ್ಮಿಶ್ರ ಸರ್ಕಾರದ ಉಭಯ ಶಾಸಕರು ಬಜೆಟ್ ನಲ್ಲಿರುವ ಕೆಲವು ವಿಷಯಗಳಿಗೆ ಅಪಸ್ವರ ವ್ಯಕ್ತವಾಗಿದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸುಧಾಕರ್ ಮಾತನಾಡಿ ಎರಡು ಕೆಜಿ ಅಕ್ಕಿಯ ಕುರಿತು ಪುನರ್​ ಪರಿಶೀಲಿಸಿ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್​ ಶಾಸಕ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ ಅವರು ಇದೇ ವೇಳೆ ಅಕ್ಕಿಯನ್ನು ಎರಡು ಕೆಜಿ ಕಡಿಮೆ ಮಾಡಿದ್ದಾರೆ. ಅದರ ಜತೆ ಎಣ್ಣೆ, ಸಕ್ಕರೆ ಕೊಡುತ್ತಿರುವುದನ್ನು ಸ್ವಾಗತ ಮಾಡುತ್ತೇನೆ. ಆದರೆ ಹಿಂದೆ ಇದ್ದಂತಹ ಏಳು ಕೆ.ಜಿ ಅಕ್ಕಿ ವಿತರಣೆಯನ್ನು ಕಡಿಮೆ ಮಾಡಬಾರದು ಎಂದು ಮನವಿ ಮಾಡಿದರು.

ಜೆಡಿಎಸ್ ನ ಹುಣಸೂರು ಕ್ಷೇತ್ರ ಶಾಸಕ ವಿಶ್ವನಾಥ್ ಅವರು ಮಾತನಾಡಿ ಪೆಟ್ರೋಲ್ ಮೇಲಿನ ಸೆಸ್ ಅನ್ನು ಪುನರ್ ಪರಿಶೀಲನೆ ಮಾಡಿ ಅಂತ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡರು.