ಚಿತ್ರದುರ್ಗ: ಭರಮಸಾಗರದ ಸಮೀಪದ ಇಸಾಮುದ್ರ ಗ್ರಾಮದಲ್ಲಿ  ಚುನಾವಣೆ ಪ್ರಚಾರದ ವೇಳೆ ಸಮಾಜ ಕಲ್ಯಾಣ ಮಂತ್ರಿ ಹೆಚ್. ಆಂಜನೇಯರು ಕುಸಿದು ಬಿದ್ದಿದ್ದರು.
ಬಿಸಿಲ ತಾಪಕ್ಕೆ ಶುಗರ್ ಏರು ಪೇರಾಗಿತ್ತು. ತಕ್ಷಣವೇ ಅವರನ್ನು ದಾವಣಗೆರೆಯ ಎಸ್ ಎಸ್ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶುಗರ್ ಏರು ಪೇರಿನಿಂದಾಗಿ ನಿತ್ರಾಣಗೊಂಡಿದ್ದಾರೆ. ಹೃದಯ ಸಂಬಂಧಿ ಯಾವುದೇ ಕಾಯಿಲೆ ಇಲ್ಲ.  ಕೆಲಕಾಲ ತೀವ್ರ ನಿಗಾದಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದೇ ವೇಳೆ ಮುನ್ನಚ್ಚರಿಕೆ ಅಂಗವಾಗಿ ಅವರನ್ನು 24 ಗಂಟೆ ವೈದ್ಯರ ಅಬ್ಸರ್ವೇಷನ್​ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ