ಬೆಳಗಾವಿ: ಇದು ತಡವಾಗಿ ಬಂದ ಸುದ್ದಿ. ಇಂದು ಬೆಳಿಗ್ಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಮಾಜ ಕಲ್ಯಾಣ  ಇಲಾಖೆ ಮಂತ್ರಿ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ಆಂಜನೇಯರ ಇಲಾಖೆಯಲ್ಲಿ ಏಜೆಂಟರ ಹಾವಳಿ ಜಾಸ್ತಿಇದೆ.  ನಮ್ಮ ಯಾವ ಕೆಲವು ನಡೆಯಲ್ಲ ಅಂತ ಹೇಳುತ್ತಿದ್ದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯರು ಶಾಕ್ ಆದರು.

ಮಂತ್ರಿಗಳ ಮೇಲೆ ಆರೋಪಮಾಡಿರುವವರು  ಬೇರ್ಯಾರು ಅಲ್ಲ ಶಾಸಕರಾದ ಎಂ.ಟಿ.ಬಿ.ನಾಗರಾಜ್.  ಅವರು ಸಚಿವರ ಮೇಲೆ ಆರೋಪಮಾಡುತ್ತಿದ್ದಂತೆ, ಬಹುತೇಕ ಕಾಂಗ್ರೆಸ್ ಶಾಸಕರು  ಮೇಜು ಕುಟ್ಟಿ ನಾಗರಾಜ್ ಅವರಿಗೆ ಬೆಂಬಲಿಸಿದ್ದಾರೆ.

ಆ ನಂತರ ಮುಖ್ಯ ಮಂತ್ರಿಗಳು ಆಯ್ತು ಎಲ್ಲಾ ಸರಿಮಾಡೋಣ ಅಂತ ತಿಪ್ಪೇಸಾರಿಸಿದ್ದಾರೆ ಎಂದು ಕೆಲ ಶಾಸಕರು ಹೇಳಿದ್ದಾರೆ.