ಚಿತ್ರದುರ್ಗ: ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ-ಕೇರಳ), ಬೆಂಗಳೂರು ಇವರ ವತಿಯಿಂದ ದೆಹಲಿ ಪೊಲೀಸ್ (ಸಿಎಪಿಎಫ್) ನಲ್ಲಿ ಖಾಲಿ ಇರುವ ಸಬ್ ಇನ್‍ಸ್ಪೆಕ್ಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಜುಲೈ 16 ಕೊನೆಯ ದಿನ.

ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ-ಕೇರಳ), ಮೊದಲ ಮಹಡಿ ಇ-ವಿಂಗ್ ಕೇಂದ್ರಿಯ ಸದನ ಕೋರಮಂಗಲ, ಬೆಂಗಳೂರು, ಇವರು ದೆಹಲಿ ಪೊಲೀಸ್ (ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ-ಸಿಎಪಿಎಫ್) ನಲ್ಲಿ 20 ರಿಂದ 25 ವರ್ಷ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಯೊಂದಿಗೆ ಸಬ್‍ಇನ್‍ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದ ಪದವಿ ಹೊಂದಿರಬೇಕು.

ಅರ್ಜಿಯನ್ನು ಜುಲೈ 15 ರಂದು ಸಂಜೆ 5 ಗಂಟೆ ಒಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ www.ssckkr.kar.nic.in ಅಥವಾ  https://ssc.nic.in  ವೀಕ್ಷಿಸಬಹುದು.  ಅಲ್ಲದೆ ದೂರವಾಣಿ 08194-230485 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.