ಚಿತ್ರದುರ್ಗ : ಪೋಲಿಸ್ ಸಬ್ ಇನ್ಸಪೆಕ್ಟರ್ ಹುದ್ದೆಗೆ 2020-21 ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಪೋಲಿಸ್ ಸಬ್ ಇನ್ಸ್‍ಪೆಕ್ಟರ್ ಸಿವಿಲ್-431 ಮತ್ತು ಪೋಲಿಸ್ ಸಬ್ ಇನ್ಸ್‍ಪೆಕ್ಟರ್ (ಸಿವಿಲ್ ಕಲ್ಯಾಣ ಕರ್ನಾಟಕ)-125 ಹುದ್ದೆಗಳಿಗೆ ನೇರ ನೇಮಕಾತಿಗೆ ಸಂಬಂಧಿಸಿದಂತೆ  ಜೂ.01 ರಿಂದ 30 ರವರೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿ ದಿನ ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸಲಾಗಿತ್ತು.

ಆದರೆ ಸರ್ಕಾರದ ಮೇ 30 ರ ಪತ್ರದನ್ವಯ ಆಡಳಿತಾತ್ಮಕ ಕಾರಣಗಳಿಂದ ಅರ್ಜಿ ಆಹ್ವಾನದ ದಿನಾಂಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮುಂದಿನ ಅರ್ಜಿ ಆಹ್ವಾನ ದಿನಾಂಕವನ್ನು ಅಭ್ಯರ್ಥಿಗಳ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಜಿ. ರಾಧಿಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.