ಚಿತ್ರುದುರ್ಗ: ಸಬ್ಸಿಡಿ ಹಣಕ್ಕೆ ಲಂಚ ಸ್ವೀಕರಿಸುತ್ತಿದ್ದಾಗ ಎ.ಸಿ.ಬಿ. ಬಲೆಗೆ ಚಿತ್ರದುರ್ಗ ತೋಟಗಾರಿಕೆ ಇಲಾಖೆ ಸಹಾಯಕ ಸಂದೀಪ್ ಕುಮಾರ್ ಬಿದಿದ್ದಾರೆ.

ಸಂದೀಪ್ ಕುಮಾರ್ ಹನಿ ನೀರಾವರಿ ಸಬ್ಸಿಡಿ ಹಣ ಮಂಜೂರು ಮಾಡಲು 10 ಸಾವಿರ ನಗದು ಸ್ವೀಕರಿಸುವಾಗ ಇಂದು ಮಾರ್ಚ್ 16 ರಂದು ಎ.ಸಿ.ಬಿ.ಗೆ ಸಿಕ್ಕಿದ್ದಾನೆ.  ಚಿತ್ರದುರ್ಗ ತಾ: ಮಾಳೇನಹಳ್ಳಿ ರೈತ ಗಂಗಾಧರ್ ಇವರಿಗೆ ಹನಿ ನೀರಾವರಿ ಸಬ್ಸಿಡಿ ಹಣ ಮಂಜೂರು ಮಾಡಲು 25 ಸಾವಿರ ಲಂಚದ ಬೇಡಿಕೆ ಇಟ್ಟು ಇದರಲ್ಲಿ ಈಗಾಗಲೇ 5 ಸಾವಿರ ಪಡೆದಿದ್ದರು. ಮತ್ತೆ 10 ಸಾವಿರ ಅವರ ಕಛೇರೀಯಲ್ಲಿ ಸ್ವೀಕರಿಸುವ ವೇಳೆ ಎ.ಸಿ.ಬಿ ಬೀಸಿದ ಬಲೆಗೆ ಬಿದ್ದಿದ್ದಾನೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಸಿಬಿ ಪೊಲೀಸ್ ಉಪಾಧೀಕ್ಷಕರಾದ ಮಂಜುನಾಥರವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಪ್ರಕಾಶ್, ಶ್ರೀಪಾದ ಡಿ.ಜಲ್ದೆ ರವರು ಹಾಗೂ ಸಿಬ್ಬಂದಿಯವರು ದಾಳಿ ನಡೆಸಿದ್ದರು.