ಬೆಂಗಳೂರು :  ಕೆಎಸ್‌ಆರ್ ಟಿಸಿ ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆಗೆ ವಿದ್ಯಾರ್ಥಿಗಳ ಸಮೂಹದಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿದ್ಯಾರ್ಥಿ ಬಸ್ ಪಾಸ್ ದರ ಏರಿಕೆಯನ್ನು ಹಿಂದಕ್ಕೆ ಪಡೆದಿದೆ.

ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ಕನಿಷ್ಠ 100 ರೂ.ನಿಂದ 250 ರೂ.ವರೆಗೆ ಹೆಚ್ಚಿಸಿ ಶುಕ್ರವಾರ ಸಂಜೆ ಕೆಎಸ್ ಆರ್ ಟಿಸಿ ಆದೇಶ ಹೊರಡಿಸಿತ್ತು. ಆದೇಶ ಹೊರಡಿಸಿದ ಬೆನ್ನಲ್ಲೇ ದರ ಹೆಚ್ಚಳ ಕೈಬಿಟ್ಟು, ಈ ಹಿಂದಿನ ವರ್ಷದ ದರದಲ್ಲೇ ಪಾಸ್ ವಿತರಿಸಲು ತೀರ್ಮಾನಿಸಲಾಗಿದೆ. ಜು. 19 ರಿಂದ ಪಾಸ್ ಗಳನ್ನು ವಿತರಿಸಲಾಗುತ್ತದೆ .ಸಾರಿಗೆ ಸಚಿವರ ಮೌಖಿಕ ಸೂಚನೆಯಂತೆ ದರ ಏರಿಕೆ ಆದೇಶ ಹಿಂಪಡೆಯಲಾಗಿದೆ. ಈ ಹಿಂದಿನ ವರ್ಷದ ದರದಲ್ಲೇ ಪಾಸ್ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ