ಬೆಂಗಳೂರು: ಶೀಘ್ರದಲ್ಲೇ ಮಾರುಕಟ್ಟೆಗೆ ಆಯುರ್ವೇದ ಮಾಸ್ಕ್ ಬರಲಿದ್ದು, ಬೆಂಗಳೂರಿನ ನೆಲಮಂಗಲ ಪಟ್ಟಣದ ವಸ್ತ್ರಭಾರತ ಸಂಸ್ಥೆಯು ಆ.15 ರಂದು 10 ಸಾವಿರ ‘ವಿಶೇಷ ಧನ್ವಂತರಿ ಆಯುರ್ವೇದ ಮಾಸ್ಕ್’ ಬಿಡುಗಡೆ ಮಾಡಲಿದೆ.

2-3 ಪದರದ ಮಾಸ್ಕ್ ಇದಾಗಿದ್ದು, ಮೂಗಿನ ಬಳಿ ಆಯುರ್ವೇದ ಗಿಡಮೂಲಿಕೆಗಳ ಪೊಟ್ಟಣವನ್ನು ಇರಿಸಲಾಗಿದೆ. ಎಲ್ಲಾ ತರಹದ ಸೋಂಕು ತಗುಲುವುದನ್ನು ತಡೆಗಟ್ಟುವ ಗಿಡಮೂಲಿಕೆಗಳ ಪುಡಿ ಮಿಶ್ರಣ ಪೊಟ್ಟಣದಲ್ಲಿ ಇದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಜೆ. ವಿನೋದ್ ಕುಮಾರ್ ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)