ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣಾ ನಡೆಯುತ್ತಿರುವುದರಿಂದ, ಚುನಾವಣೆಯ ದಿನ ಆಯಾ ಜಿಲ್ಲೆಗಳಲ್ಲಿ ರಜೆ ನೀಡಲಾಗುವುದು.

ಏ.17ಕ್ಕೆ ಮಹಾವೀರ ಜಯಂತಿ, ಏ.18ಕ್ಕೆ ಮತದಾನ ಹಾಗೂ ಏ.19ಕ್ಕೆ ಗುಡ್ ಫ್ರೈಡೇ ಇರುವುದರಿಂದ ಈ ಮೂರು ದಿನಗಳ ಕಾಲ ಬ್ಯಾಂಕ್ ಗಳಿಗೂ ಕೂಡ ರಜೆ ಇರಲಿದೆ.

ರಾಜ್ಯದ 14 ಜೆಲ್ಲೆಗಳಲ್ಲಿ ಈ ಮೂರು ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರುವ ಕಾರಣ ಗ್ರಾಹಕರು ತಮ್ಮ ಬ್ಯಾಂಕ್ ವಹಿವಾಟನ್ನು ಮುಂಚಿತವಾಗಿಯೇ ಮಾಡಿಕೊಳ್ಳುವುದು ಉತ್ತಮ.