ನವದೆಹಲಿ: ಸಣ್ಣ ಹಾಗೂ ಮಧ್ಯಮ ಉದ್ಯಮದವರಿಗೆ ಕರೋನಾ ನಂತರದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ 3 ಲಕ್ಷ ಕೋಟಿ ರೂ. ಮೌಲ್ಯದ ತುರ್ತು ಕ್ರೆಡಿಟ್​ ಲೈನ್​ ಗ್ಯಾರಂಟಿ ಸ್ಕೀಮ್​ನ್ನು ನವೆಂಬರ್​ 30 ರವರೆಗೆ ವಿಸ್ತರಣೆ ಮಾಡಿದೆ.

ಪ್ರಸ್ತುತ ಹಬ್ಬದ ಸೀಸನ್​ ಆಗಿರುವ ಹಿನ್ನೆಲೆ ಸಣ್ಣ ಹಾಗೂ ಮಧ್ಯಮ ಉದ್ಯಮದವರಿಗೆ ಅನುಕೂಲವಾಗಬಹುದೆಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆತ್ಮ ನಿರ್ಭರ್​ ಭಾರತ್​ ಪ್ಯಾಕೇಜ್​ನ ಭಾಗವಾಗಿ ಎಂಎಸ್​ಎಂಇಗಳು, ವ್ಯಾಪಾರೋದ್ಯಮ ಹಾಗೂ ವ್ಯಾಪಾರ ಉದ್ದೇಶಕ್ಕೆ ವೈಯಕ್ತಿಕ ಸಾಲ ಮತ್ತು ಮುದ್ರಾ ಸಾಲಗಾರರಿಗೆ ಹೆಚ್ಚಿನ ಅನುಕೂಲ ನೀಡುವುದಕ್ಕೋಸ್ಕರ 20.97 ಲಕ್ಷ ಕೋಟಿ ರೂಪಾಯಿ ತುರ್ತು ಕ್ರೆಡಿಟ್​ ಲೈನ್​ ಗ್ಯಾರಂಟಿ ಸ್ಕೀಮ್​ನ್ನ ಘೋಷಣೆ ಮಾಡಿತ್ತು .

ಫೆಬ್ರವರಿ 29ರ ವೇಳೆಯಲ್ಲಿ 50 ಕೋಟಿ ರೂಪಾಯಿವರೆಗೆ ಸಾಲ ಹೊಂದಿರುವವರು ಹಾಗೂ ವಾರ್ಷಿಕ 250 ಕೋಟಿ ವಹಿವಾಟು ನಡೆಸುವವರು ಈ ಯೋಜನೆ ಲಾಭ ಪಡೆಯಬಹುದಾಗಿದೆ.

(ಸಾಂದರ್ಭಿಕ ಚಿತ್ರ)