ಬೆಂಗಳೂರು: ಕಳೆದ ಮೂರುದಿನಗಳಿಂದ ನಡೆಯುತ್ತಿದ್ದ ಕೈ ಪಾಳ್ಯದ ಸಚಿವ ಸ್ಥಾನದ ಆಕಾಂಕ್ಷಿಗಳ ಸಭೆ ಮುಕ್ತಾಯವಾಗಿದ್ದು ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಂ.ಬಿ.ಪಾಟೀಲರು ಹೇಳಿದ್ದಾರೆ.

ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಉಪ ಮುಖ್ಯಮಂತ್ರಿ ಹುದ್ದೆಯ ಆಸೆಯೂ ಇದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ವೇಳೆಯಲ್ಲಿ ಹೇಳಿಕೊಂಡಿದ್ದರು.

ಈ ನಡುವೆ ಸಮ್ಮಿಶ್ರ ಸರ್ಕಾರದ ಮೊದಲ ಹಂತದ ಸಚಿವ ಸಂಪುಟ ರಚನೆ ವೇಳೆಯಲ್ಲಿ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಸಿಟ್ಟಾಗಿರುವ ಎಂಬಿ ಪಾಟೀಲ್ ಈಗ ದೊಡ್ಡಮಟ್ಟದಲ್ಲಿ ಹೈ ಕಮಾಂಡ್ ಗೆ ಬೇಡಿಕೆ ಇಟ್ಟಿದ್ದು, ನನಗೆ ಕೊಟ್ಟರೆ ಡಿಸಿಎಂ ಹುದ್ದೆ ಕೊಡಿ ಇಲ್ಲವಾದ್ರೇ ನನಗೆ ಸಚಿವ ಸ್ಥಾನ ಬೇಡ ಎಂದು ಹೇಳಿದ್ದರು.

ಆದರೆ ಸಚಿವ ಸ್ಥಾನದ ಆಕಾಂಕ್ಷಿಗಳ ಸಭೆ ಮುಕ್ತಾಯವಾಗಿದ್ದು, ಸಚಿವ ಸ್ಥಾನದ ಅತೃಪ್ತ ಗುಂಪು ದೆಹಲಿಗೆ ಹೋಗಿ ಹೈಕಮಾಂಡ್ ಗೆ ತಮ್ಮ ಇಂಗಿತವನ್ನುತಿಳಿಸಲಿದ್ದಾರೆ. ಹಾಗೂ ಸಾಮೂಹಿಕ ಹೋರಾಟವನ್ನು ಮುನ್ನೆಡಸಲಾಗುವುದು ಎಂದು ಹೇಳಿದ್ದಾರೆ.