ಬೆಂಗಳೂರು: ಇದೇ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಗೆ  ಮೂಹೂರ್ತ ಫಿಕ್ಸ್ ಆಗಿತ್ತು. ಜೆಡಿಎಸ್ನಲ್ಲಿ ಯಾವುದೇ ಗೊಂದಲಗಳು ಇರಲಿಲ್ಲ ಆದ್ರೆ ಕಾಂಗ್ರೆಸ್ ನಲ್ಲಿ ಮಾತ್ರ ಗೊಂದಲ ಗೂಡಾಗಿದೆಯಂತೆ.!

ಸಂಪುಟ ವಿಸ್ತರಣೆ ಮೂಹೂರ್ತಕ್ಕೆ ದಿನಗಣನೆ ಪ್ರಾರಂಭವಾಗಿ ಯಾರು ಮಂತ್ರಿ ಮಂಡಲದಲ್ಲಿ ಸೇರಬೇಕು ಎಂಬ ಲೆಕ್ಕಾಚಾರದಲ್ಲಿದ್ದಾಗ, ಇತ್ತ ಜಾರಕಿಹೊಳಿ ಬ್ರದರ್ಸ್ ರ ನಡೆಯಿಂದ ಹಾಗೂ ಲೋಕಸಭೆ ಚುನಾವಣೆ ಮುಗಿಯುವ ತನಕ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುವುದು ಬೇಡ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿದೆಯಂತೆ.

ಒಟ್ಟಿನಲ್ಲಿ ಕಾಂಗ್ರೆಸ್ ಗೆ 6 ಸಚಿವ ಸ್ಥಾನ ಮತ್ತು 20 ನಿಗಮ ಮಂಡಳಿಗಳ ಹುದ್ದೆಗೆ ತುಂಬುವ ಮೂಹೂರ್ತ ಸದ್ಯಕ್ಕೆ ಮುಂದಕ್ಕೆ ಹೋಗಿದೆ ಎಂಬ ಸುದ್ದಿ ಕಾಂಗ್ರೆಸ್ ನಲ್ಲಿ ಹರಿದಾಡುತ್ತಿದೆ.