ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಕೊಂಡವರಿಗೆ ಮತ್ತೊಂದು ತಿಂಗಳು ಕಾಯಬೇಕಿದೆ ಏಕೆಂದ್ರೆ ಆಷಾಡ ಮಾಸ ಶುರುವಾಗಲಿದ್ದು, ಈ ಸಮಯದಲ್ಲಿ ಸಚಿವ ಸಂಪುಟವನ್ನು ವಿಸ್ತರಣೆ ಬೇಡ, ಇದಲ್ಲದೇ ಮಾಜಿ ಪ್ರಧಾನಿ ದೇವೇಗೌಡರು ಇಂತಹುಗಳನ್ನು ನಂಬುವುದರಿಂದ ಅವರು ಕೂಡ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡುವುದಿಲ್ಲ ಅಂತ ಗೃಹ ಸಚಿವ, ಡಿಸಿಎಂ ಡಾ.ಜಿ.ಪರಮೇಶ್ವರ್ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದ ವೇಳೆಯಲ್ಲಿ  ಹೇಳಿದ್ದಾರಂತೆ

ಆದ್ದರಿಂದ ಆಷಾಡ ಕಳೆದ ಬಳಿಕ ಸಚಿವ ಸಂಪುಟ ವಿಸ್ತರಣೆಯನ್ನು ಮಾಡಿದರೆ ಒಳಿತು ಎನ್ನುವ ಮಾತನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಮನದಟ್ಟು ಮಾಡಿದ್ದು, ಇದಕ್ಕೆ ಹೈಕಮಾಂಡ್ ಕೂಡ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.. ಆಷಾಡ ಮುಗಿದ ಮೇಲೆ  ಸಚಿವ ಸಂಪುಟ ವಿಸ್ತರಣೆ ಆಗುವ ಸಾದ್ಯತೆ ಇದೆಯಂತೆ.