ಚಿತ್ರದುರ್ಗ: ಆರೋಗ್ಯ ಸಚಿವ ಶ್ರೀರಾಮುಲು ದಗಾಕೋರ, ಲಂಚಕೋರ, ಭ್ರಷ್ಟ ಎಂದು ಚಿತ್ರದುರ್ಗದಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.

ಸಚಿವರಿಂದ ಯಾವ  ಅಭಿವೃದ್ಧಿಯೂ ಇಲ್ಲ, ಜನರ ರಕ್ಷಣೆಯೂ ಆಗುತ್ತಿಲ್ಲ. ಸಚಿವರ ಪಿಎಗಳಿಗೆ ಸುಲಿಗೆ ಮಾಡುವುದು ಮಾತ್ರ ಗೊತ್ತಿದೆ. ಪರಶುರಾಂಪುರದಲ್ಲಿ ರಾಮುಲು ಸಾವಿರಾರು ಜನರ ನಡುವೆ ಮೆರವಣಿಗೆ ಮಾಡಿಸಿಕೊಂಡಿದ್ದರು. ರಾಮುಲು ವಿರುದ್ಧ ದೂರು ದಾಖಲಾಗಿಲ್ಲ. ಆದರೆ ಪುತ್ರನ ಮದುವೆ ಮಾಡಿದ್ದಕ್ಕೆ ಮಾಜಿ ಶಾಸಕರ ವಿರುದ್ಧ ದೂರು ದಾಖಲಾಗಿದೆ ಹೇಗೆ ಇವರ ರಾಜಕೀಯ ಎಂದು ಹೇಳಿದ್ದಾರೆ.