ಬೆಂಗಳೂರು :ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ್ ವಿರುದ್ಧ ಇದೀಗ ಐಟಿ ಇಲಾಖೆಯ ಅಧಿಕಾರಿಗಳಿಂದ ದೂರುದಾಖಲಾಗಿದೆ.

ಡಿ.ಕೆ.ಶಿ ಹಾಗೂ ಅವರ ಅನುಯಾಯಿಗಳು ಸರಕಾರಕ್ಕೋಕೆ ಟ್ಯಾಂತರ ರೂಪಾಯಿ ವ್ಯವಹಾರ ಮುಚ್ಚಿಟ್ಟು ತೆರಿಗೆ ವಂಚನೆ ಮಾಡಿದ ಆರೋಪದ ಅಡಿಯಲ್ಲಿ ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಡಿ.ಕೆ. ಶಿವಕುಮಾರ್ ವಿರುದ್ಧ ಈಗಾಗಲೇ 3 ಕೇಸ್ ದಾಖಲಿಸಿದ್ದು, ಐಟಿ ಕಾಯಿದೆ ಸೆಕ್ಷನ್ 277, 278 ಹಾಗೂ ಐಪಿಸಿ ಸೆಕ್ಷನ್ 193, 199, 120(ಬಿ) ಅಡಿ ದೂರು ದಾಖಲು ಮಾಡಲಾಗಿದ್ದು,  ಡಿ.ಕೆ. ಶಿವಕುಮಾರ್ , ಸೇರಿದಂತೆ ಸಚಿನ್‌ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ದೂರು ದಾಖಲಾಗಿದ್ದು, ಸಮನ್ಸ್ ಜಾರಿ ಮಾಡಲಾಗಿದೆ. ಇದರಿಂದ, ಡಿಕೆಶಿ ಗೆ ಕಂಠಕ ಶುರುವಾಗಿದೆ.