ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಹೆಸರಿನಲ್ಲಿರುವ 20 ಎಕರೆ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ಡಿಕೆಶಿ ತಾಯಿ  ಹೆಸರಿನಲ್ಲಿ ಬೇನಾಮಿ ಆಸ್ತಿ ಇರುವುದು ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಗೌರಮ್ಮ ಹೆಸರಿನಲ್ಲಿರುವ ಆಸ್ತಿ ಜಪ್ತಿ ಮಾಡುವುದಾಗಿ ಸೂಚಿಸಿದ ಐಟಿ, ಮುಂದಿನ 3 ತಿಂಗಳಿನಲ್ಲಿ ಈ ಆಸ್ತಿ ಬಗ್ಗೆ ಸೂಕ್ತ ಉತ್ತರ ನೀಡದಿದ್ದರೆ ಜಪ್ತಿ ಮಾಡಲಾಗುವುದು ಎಂದು ಸಚಿವ ಡಿಕೆಶಿ ಅವರಿಗೆ 42 ಪುಟಗಳ ಮುಟ್ಟುಗೋಲು ಆದೇಶ ಹೊರಡಿಸಿದ್ದಾರೆ.