ಬೆಳಗಾವಿ : ಸಾರ್ ನಮಗೆ ಬಾಳ ತ್ರಾಸ್ ಆಗೈತಿ, ಒಂದೆರಡು ದಿನ ವೈನ್ ಶಾಪ್ ಓಪನ್ ಮಾಡಿ ಸಾರ್ ಎಂಬುದಾಗಿ ನನಗೆ ಎಲ್ಲೆಲ್ಲಿಂದಲೋ ದೂರವಾಣಿ ಮಾಡುತ್ತಿದ್ದಾರೆ. ಒತ್ತಾಯ ಮಾಡುವ ಮೂಲಕ ಕಾಟ ಕೊಡ್ತಾ ಇದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಕುಟುಕರ ಕಾಟದ ಅಳಲನ್ನು ತೋಡಿಕೊಂಡಿದ್ದಾರೆ.!

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ನಮಗೆ ಎಲ್ಲೆಲ್ಲಿಂದಲೋ ಪೋನ್ ಗಳು ಬರ್ತಾವೆ. ಒಂದೆರಡು ದಿನ ವೈನ್ ಶಾಪ್ ಆರಂಭಿಸಿ ಅಂತಾರೆ. ನಮಗೆ ಬಾಳ ತ್ರಾಸ್ ಆಗಿದೆ ಅಂತಾರೆ. ಅಂದಹಾಗೇ ದೇಶಾದ್ಯಂತ ಲಾಕ್ ಡೌನ್ ಆದ ಮೇಲೆ ಎಣ್ಣೆ ಅಂಗಡಿ ಬಂದ್ ಆಗಿದೆ. ಈ ಹಿನ್ನಲೆಯಲ್ಲಿ ಮದ್ಯ ಸಿಗದೇ ಬೇಸತ್ತು ರಾಜ್ಯದ ವಿವಿಧೆಡೆ 13ಕ್ಕೂ ಹೆಚ್ಚು ಕುಡುಕರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ಕೊರೊನಾ ಸಾವಿಗಿಂತ ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಹೆಚ್ಚಾಗಿದೆ.!