ಬೆಂಗಳೂರು: ಚುನಾವಣೆಯಲ್ಲಿ ಸಕ್ಕರೆ ಕಂಪೆನಿಗಳ ಮಾಲೀಕರಿಗೆ ಮತ ಹಾಕಿ ಶಾಸಕರು ಹಾಗೂ  ಸಚಿರನ್ನಾಗಿ ಮಾಡಿದವರು ಯಾರು.?  ಈಗ ಕುಮಾರಸ್ವಾಮಿ ಸರ್ಕಾರ ಕಬ್ಬಿನ ಬಾಕಿ ಕೊಡಿಸಲಿಲ್ಲ ಎಂದು ಪ್ರತಿಭಟನೆ ಮಾಡುತ್ತಿರುವುದು ಸರಿನಾ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಹೇಳಿದ್ದಾರೆ.

ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಕೃಷಿ ಮೇಳದ ಕೊನೆಯ ದಿನದ ಸಮಾರೋಪ ಸಮಾರಂಭದಲ್ಲಿ ಇಂದು ಅತ್ತುತ್ತಮ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೆಸರಿನಲ್ಲಿ ಕೆಲವರು ಬೆಳಗಾವಿ ಸುವರ್ಣಸೌಧ ಬೀಗ ಹೊಡೆಯುತ್ತಿದ್ದಾರೆ. ರೈತರು ಶಾಂತಿ ಪ್ರೀಯರು, ಅವರ ಹೆಸರಿನಲ್ಲಿ ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ದರೋಡೆ ಮಾಡುವವರ ರೀತಿಯಲ್ಲಿ ಕಲ್ಲು ತೆಗೆದುಕೊಂಡು ಹೋಗಿ ಸುವರ್ಣ ಸೌಧದ ಬೀಗ ಹೊಡೆಯುತ್ತಿದ್ದಾರೆ, ಅವರು ನಿಜವಾದ ರೈತರಲ್ಲ ಗೂಂಡಾಗಳು ಎಂದು ಹೇಳಿದ್ರು.!