ಚಿತ್ರದುರ್ಗ: ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಚಂದ್ರಪ್ಪರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಸಾಲ ಸೌಲಭ್ಯ ನಿರಾಕರಿಸುವ ಬ್ಯಾಂಕ್ ಗಳ ವ್ಯವಸ್ಥಾಪಕರ ವಿರುದ್ಧ ಕೇಂದ್ರ ಎಸ್ಸಿ ಎಸ್ಟಿ ಆಯೋಗಕ್ಕೆ ದೂರು ನೀಡಲಾಗುತ್ತದೆ ಎಂದು ಹೇಳಿ ಇನ್ನೂ ಮೂರುದಿನಗಳಾಗಿಲ್ಲ ಆದ್ರೆ ಬ್ಯಾಂಕ್ ಅಧಿಕಾರಿ ಹತ್ತಿರ ಸಾಲ ಕೇಳೋಕೆ ಹೋದ್ರೆ ಏನು ಹೇಳಿದ್ದಾರೆ ಅಂದ್ರೆ

ಓಟು ಹಾಕಿರ್ತಿರಾ ಹೇಳಿರ್ತಾನೆ ಹೋಗ್ರಿ ಹೀಗಂಥ ಜಿಲ್ಲೆಯ ಸಂಸದರ ವಿರುದ್ಧ  ಏಕವಚನದಲ್ಲಿ ಮಾತನಾಡಿದ್ದಾರಂತೆ. ಚಿತ್ರದುರ್ಗದ ಎಪಿಎಂಸಿ ರಸ್ತೆಯ ಎಸ್ ಬಿಐ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ಸಾಲ ಕೇಳಲು ಬಂದ ಗ್ರಾಹಕರ ಎದುರು ಉದ್ದಟತನದ ಮಾತುಗಳನ್ನಾಡಿರುವ ಘಟನೆ ನಡೆದಿದೆಯಂತೆ.

ಹಾಲಿನ ಡೈರಿ ಮಾಡಲು ಸಾಲ ಕೇಳಲು ಬಂದ ಗ್ರಾಹಕರಿಗೆ ಕಳೆದ ಆರು ತಿಂಗಳಿನಿಂದ ಇಲ್ಲದ ಸಬೂಬುಗಳನ್ನು ಹೇಳುತ್ತಾ ಬಂದಿರುವುದು ಅಲ್ಲದೆ ಸೋಮವಾರ ಮತ್ತೊಮ್ಮೆ ನಮ್ಮಲ್ಲಿ ಪೀಲ್ಡ್ ಆಫೀಸರ್ ಇಲ್ಲ ಎಂದು ಉಡಾಪೆ ಉತ್ತರ ನೀಡಿ ಹೊರ ಹೋಗುವಂತೆ ಕೂಡ ಹೇಳಿರುವ ಘಟನೆ ನಡೆದಿದೆ.

ಸಂಸದರು ಹೇಳಿದ್ರು, ಶಾಸಕರು ಹೇಳಿದ್ರು ಬ್ಯಾಂಕಿನವರು ಕ್ಯಾರೆ ಅನ್ನುವುದಿಲ್ಲ.  ಮೀಟಿಂಗ್ ನಲ್ಲಿ ಮಾತ್ರ ಸುಮ್ಮನಿರುತ್ತಾರೆ ಮೀಟಿಂಗ್ ನಿಂದ ಹೊರ ಬರುತ್ತಿದ್ದಂತೆ ತಮ್ಮದೇ ವರಸೆ ತೋರಿಸುತ್ತಾರೆ  ಇಂತಹ ಚುನಾಯಿತ ಪ್ರತಿನಿಧಿಗಳ ಮಾತೇ ಕೇಳಲ್ಲ ಅಂದ್ರೆ ನಮ್ಮಂತ ನಿಮ್ಮಂತವರ ಪಾಡೇನು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.