ಬೆಂಗಳೂರು: ರಾಜ್ಯದ ಸಂಸದರಿಗೆ ಐಫೋನ್ ಕೊಟ್ಟ ವಿಚಾರ ಗೊಂದಲಕ್ಕೆ ತೆರೆ ಎಳದಿದ್ದಾರೆ ಡಿ.ಕೆ.ಶಿವಕುಮಾರ್ ಏನಂತ.? ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ತ್ವರಿತವಾಗಿ ಮಾಹಿತಿ ಸಿಗಲಿ ಎಂಬ ಸದುದ್ದೇಶದಿಂದ ಐಫೋನ್‌ನ್ನು ನನ್ನ ಸ್ವಂತ ಖರ್ಚಿನಲ್ಲಿ ಕೊಟ್ಟಿದ್ದೇನೆಂದು ಹೇಳಿದ್ದಾರೆ.

ಸಂಸದರಿಗೆ ನೀಡಲಾಗಿರುವ ಐಫೋನ್ ಕುರಿತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಪೌರಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ. ಆದರೆ, ಸಂಸದರಿಗೆ ಐಫೋನ್ ಕೊಡಲಾಗಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲವೂ ಹಳದಿ. ಸಂಸದರಿಗೆ ಐಫೋನ್ ಕೊಟ್ಟಿರುವುದು ಸರಕಾರದ ಹಣದಿಂದಲ್ಲ. ನನ್ನ ಸ್ವಂತ ಖರ್ಚಿನಿಂದ ಎಂದು ತಿರುಗೇಟು ನೀಡಿದ್ದಾರೆ. ಎಷ್ಟು ಸರಿ ಎಷ್ಟು ಸುಳ್ಳು ಎಂಬುದನ್ನು ಆರ್ ಟಿಐ ನಲ್ಲಿ ಹಾಕಿದ್ರೆ ಸಿಗುತ್ತೆ ಎಂಬುದು ಮತ್ತೊಂದು ವಾದ.!

ಹಾಗಾದ್ರೆ ಡಿಕೆಶಿ ಏಕೆ ಸಂಸದರಿಗೆ ಆಪಾಟಿ ಹಣ ಖರ್ಚು ಮಾಡಿ ಐಫೋನ್ ಕೊಡಸಬೇಕು ಎಂಬದು ಜೆಸ್ಟ್ ಡೈಲಾಗ್.!