ನವದೆಹಲಿ:: ಸಂಸತ್ತಿನ ಮುಂಗಾರು ಅಧಿವೇಶನ  ನಾಳೆಯಿಂದ ಆರಂಭವಾಗಲಿದ್ದು, ಸುಗಮ ಕಲಾಪಕ್ಕೆ ಎಲ್ಲಾ ಪಕ್ಷಗಳು ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಅಧಿವೇಶನ ಹಿನ್ನೆಲೆಯಲ್ಲಿ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ, ಜನರು ತಮ್ಮಿಂದ ನಿರೀಕ್ಷಿಸುತ್ತಿರುವ ವಿಷಯಗಳನ್ನು ಸದನದಲ್ಲಿ ಚರ್ಚಿಸುವಂತೆ ಪ್ರಧಾನಿ ಎಲ್ಲಾ ನಾಯಕರಿಗೂ ಹೇಳಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ತಿಳಿಸಿದರು.

ಸುಗಮ ಕಲಾಪಕ್ಕೆ ಎಲ್ಲಾ ಪಕ್ಷಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಕಲಾಪ ಸುಗಮವಾಗಿ ಸಾಗಲು ಬೆಂಬಲ ಕೋರುವುದಾಗಿ ಎಲ್ಲಾ ಪಕ್ಷಗಳು ತಿಳಿಸಿವೆ . ಕಲಾಪಕ್ಕೆ ಪ್ರತಿಪಕ್ಷಗಳು ಬೆಂಬಲ ನೀಡುವ ಬಗ್ಗೆ ಸರ್ಕಾರ ವಿಶ್ವಾಸ ಇಟ್ಟುಕೊಂಡಿದೆ