ಚಿತ್ರದುರ್ಗ: ಭರಮಣ್ಣ ನಾಯಕನ ಕಾಲದಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ಸಂತೆಹೊಂಡದಲ್ಲಿ ಕಸ ಸುರಿಯುತ್ತಿದ್ದ ಪೂಜಾ ಆಟೋಮೊಬೈಲ್ಸ್ ಮಾಲೀಕರಿಗೆ ನಗರಸಭೆ ಇಪ್ಪತ್ತೈದು ಸಾವಿರ ರೂ.ದಂಡ ವಿಧಿಸಿರುವುದು ನಗರಸಭೆ ಇತಿಹಾಸದಲ್ಲಿಯೆ ಇದು ಪ್ರಥಮ.

ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಭರ್ತಿಯಾಗಿ ಝೇಂಕರಿಸುತ್ತಿರುವ ಸಂತೆಹೊಂಡವನ್ನು ಗುರುವಾರ ನಗರಸಭೆಯವರು ಸ್ವಚ್ಚಗೊಳಿಸುತ್ತಿರುವ ಸಂದರ್ಭದಲ್ಲಿಯೇ ಹಿಂಭಾಗದಲ್ಲಿರುವ ಪೂಜಾ ಆಟೋಮೊಬೈಲ್ಸ್‌ನವರು ಕಸವನ್ನು ತಂದು ಹೊಂಡದಲ್ಲಿ ಸುರಿಯುತ್ತಿದ್ದುದನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ನಗರಸಭೆಯವರು ಸಂಜೆ ಆಟೋಮೊಬೈಲ್ಸ್‌ಗೆ ತೆರಳಿ ದಂಡ ವಿಧಿಸಿ ಇನ್ನು ಮುಂದೆ ಹೊಂಡದಲ್ಲಿ ಕಸ ಸುರಿದರೆ ಪರವಾನಗಿಯನ್ನು ರದ್ದುಪಡಿಸುವುದಾಗಿ ಎಚ್ಚರಿಸಿದರು.

ನಗರಸಭೆ ಅಧ್ಯಕ್ಷ ಹೆಚ್.ಎನ್.ಮಂಜುನಾಥಗೊಪ್ಪೆ, ಹೆಲ್ತ್‌ಇನ್ಸ್‌ಪೆಕ್ಟರ್‌ಗಳಾದ ಕಾಂತರಾಜ್, ಸರಳ, ಭಾರತಿ, ಪರಿಸರ ಇಂಜಿನಿಯರ್ ಜಾಫರ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.