ಚಿತ್ರದುರ್ಗ: ಎಳ್ಳು-ಬೆಲ್ಲ ಸವಿದು ಒಳ್ಳೆ ಮಾತನಾಡಿ ಎನ್ನುವ ಸಂಕೇತ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂತೆಹೊಂಡದ ರಸ್ತೆಯಲ್ಲಿ ಕಬ್ಬಿನ ಮಾರಾಟ ಬಿರುಸಿನಿಂದ ಕೂಡಿತ್ತು.

ಎಳ್ಳು-ಬೆಲ್ಲ, ಸಕ್ಕರೆ ಮಿಠಾಯಿ, ಕಬ್ಬನ್ನು ಪರಸ್ಪರರು ಹಂಚಿಕೊಂಡು ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿರುವುದರಿಂದ ಬುಧವಾರ ಕಬ್ಬಿನ ಜಲ್ಲೆಗಳ ಖರೀಧಿಗೆ ಜನ ಮುಗಿಬಿದ್ದಿದ್ದರು. ಒಂದು ಜೋಡಿ ಕಬ್ಬಿನ ಜಲ್ಲೆ ಎಂಬತ್ತರಿಂದ ನೂರು ರೂ.ಗಳಿಗೆ ಮಾರಾಟವಾಗುತ್ತಿತ್ತು.

ಇದರ ಜೊತೆ ಅವರೆಕಾಯಿ, ಗೆಣಸು ಕೂಡ ಸಂತೆಹೊಂಡದ ರಸ್ತೆಯಲ್ಲಿ ಅಲ್ಲಲ್ಲಿ ಮಾರಾಟವಾಗುತ್ತಿದ್ದರಿಂದ ಬೆಳಗಿನಿಂದ ಸಂಜೆಯತನಕ ಈ ರಸ್ತೆ ಜನಸಂದಣಿಯಿಂದ ಕೂಡಿತ್ತು.