ಚಿತ್ರದುರ್ಗ: ಜಿಲ್ಲೆಯಲ್ಲಿ ಮೊಳಕಾಲ್ಮೂರು ಕ್ಷೇತ್ರ ಅತ್ಯಂತ ಪ್ರತಿಷ್ಠಿತ ಕಣವಾಗಿದೆ. ಬಿಜೆಪಿಯಿಂದ ಶ್ರೀರಾಮುಲು, ಕಾಂಗ್ರೆಸ್ ನಿಂದ ಯುವ ಯೋಗೇಶ್ ಬಾಬು, ಪಕ್ಷೇತರ ರಾಗಿ ಹಾಲಿ ಶಾಸಕ ತಿಪ್ಪೇಸ್ವಾಮಿ ಮಧ್ಯೆ ತೀರ್ವಪೈಪೋಟಿ ನಡೆಯುತ್ತಿರುವ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಶ್ರೀ ರಾಮುಲು ಪರ ಮತಯಾಚನೆ ನಡೆಸಲಿದ್ದಾರಂತೆ.

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಬಿ.ಶ್ರೀರಾಮುಲು ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಆಗಮಿಸಲಿರುವ ನಟ ಯಶ್, ನಂತರ ಮೊಳಕಾಲ್ಮೂರು ಪಟ್ಟಣ, ರಾಂಪುರದಲ್ಲಿ ರೋಡ್ ಶೋ.

ಆದ್ರೆ ನಟ ಯಶ್  ಶ್ರೀರಾಮುಲು ಪರವಾಗಿ ಪ್ರಚಾರ ನಡೆಸಿದ್ರೆ ಏನಾದರೂ ವರ್ಕ್ಔಟ್ ಆಗುತ್ತಾ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಹೇಳುವಂತೆ ನಟ ರ ರೋಡ್ ಶೋ ಗಳಿಂದ  ಮತಗಳೇನು ಬದಲಾಗಲ್ಲ ಎಂಬ ವಾದವನ್ನು ಮಂಡಿಸುತ್ತಾರೆ ಆದ್ರೆ ಮತ ಎಣಿಕೆ ನಂತರವೇ……?