ಚಿತ್ರದುರ್ಗ: ಶ್ರೀರಾಮುಲು ಸೋಲಿಸುವುದು ನನ್ನ ಗುರಿ ಎಂದು ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಹೇಳಿದ್ದಾರೆ.

ಮೊಳಕಾಳ್ಮೂರು ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಸಿಗದೇ ಶ್ರೀರಾಮುಲು ಅವರಿಗೆ ಪಕ್ಷದ ಟಿಕೆಟ್ ನೀಡಿರುವುದರಿಂದ ಕೆಂಡ ಮಂಡಲವಾದ ತಿಪ್ಪೇಸ್ವಾಮಿ ಇಂದು ತಮ್ಮ ಸ್ವಂತ ಊರಿನ ನೇರ್ಲಗುಂಟೆಯಲ್ಲಿ ಕರೆಯಲಾಗಿದ್ದ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದರು.

ಸಭೆಗೂ ಮುನ್ನಾ ಅಂಬೇಡ್ಕರ್ ೧೨೭ ಜನ್ಮದಿನ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಶಾಸಕ ತಿಪ್ಪೇಸ್ವಾಮಿ  ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಜನರು ಬಿಜೆಪಿಗೆ ಮತಹಾಕಬಾರದು . ಈ ಚುನಾವಣೆಯಲ್ಲಿ ಶ್ರೀರಾಮಲು ಬಳ್ಳಾಗೆ ಗಂಟು ಮೂಟೆ ಕಟ್ಟಿಕೊಂಡು ಹೋಗುವುದ ಗ್ಯಾರಂಟಿ ಎಂದುರು.ಬೆಂಬಲಿಗರು ಮಾತ್ರ  ಪಕ್ಷೇತರವಾಗಿ ಸ್ಪರ್ಧಿಸಲು ತಿಪ್ಪೇಸ್ವಾಮಿಗೆ ಒತ್ತಡಹಾಕಿದರು.
ಬಳ್ಳಾರಿ ಜನ ನಿಮ್ಮನ್ನು ಸೋಲಿಸುತ್ತಾರೆ ಎನ್ನುವ ಭೀತಿಯಿಂದ ಕೋಟೆನಾಡಿಗೆ ಲಗ್ಗೆ ಇಟ್ಟಿದ್ದೀರಿ ನಾವು ಕೋಟೆ ನಾಡಿನ ಜನ ನಿಮ್ಮ ಮಾತಿಗೆ ಮನ್ನಣೆಹಾಕಲ್ಲ  ನಿಮ್ಮ ದುಡ್ಡಿನ ಬಲ ತೋರಿಸುತ್ತೀರಾ ನಮ್ಮ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಯಾವುದೇ ಪಕ್ಷ ಕರೆದರೂ ಆ ಪಕ್ಷದಿಂದ ಸ್ಪರ್ಧಿಸಲು ನಾನು ಸಿದ್ದ ಇಲ್ಲವಾದರೆ ಬೆಂಬಲಿಗರ ಒತ್ತಾಯದಂತೆ ಪಕ್ಷೇತರನಾಗಿಯೂ ಕಣಕ್ಕಿಳಿಯಲು ಸಿದ್ದ ಎಂದು ಹೇಳಿದ್ದಾರೆ.

( ವಿಡಿಯೋ ನೋಡಲು bcsuddi.com youtube ನಲ್ಲಿ ನೋಡಿ.)