ಚಿತ್ರದುರ್ಗ: ಮೊಳಕಾಲ್ಮೂರು ಬಿಜೆಪಿ ಟಿಕೆಟ್ ವಂಚಿತ ಎಸ್.ತಿಪ್ಪೇಸ್ವಾಮಿ ಕೊನೆಗೂ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಬಳ್ಳಾರಿ ಸಂಸದ ಶ್ರೀರಾಮುಲು ಭರ್ಜರಿ ರೋಡ್ ಶೋ ಮೂಲಕ ಶನಿವಾರ ಉಮೇದುವಾರಿಕೆ ಸಲ್ಲಿಸಿ ಗಮನ ಸೆಳೆದಿದ್ದರು. ರಾಮುಲುಗೆ ಕೋಟೆ ನಾಡಿನ ಪಾಳೇಗಾರರ ತಾಕ್ಕತ್ತೇನೆಂದು ತೋರಿಸುತ್ತೇನೆ ಎಂದು ಪಣತೊಟ್ಟಿರುವ ತಿಪ್ಪೇಸ್ವಾಮಿ ಇಂದು ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದರು.

ಅಂದ ಹಾಗೇ ಮ್ಯಾಸನಾಯಕ ಸಾಂಪ್ರದಾಯದಂತೆ ಕಂಬಳಿ ಹೆಗಲ ಮೇಲೆ ಹಾಕಿಕೊಂಡು, ವಾಹನದ ಮೇಲೆ ಏರಿ ಅಭಿಮಾನಿಗಳತ್ತ ಕೈ ಬೀಸುತ್ತ ಗಮನ ಸೆಳೆದರು. ವಾಲ್ಮೀಕಿ ಸಮುದಾಯದಲ್ಲಿ ಊರು ನಾಯಕ, ಮ್ಯಾಸನಾಯಕ ಒಳಪಂಗಡಗಳಿವೆ. ಈ ಪಂಗಡಗಳು ಕ್ಷೇತ್ರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣದಿಂದ ತಿಪ್ಪೇಸ್ವಾಮಿ ಕಂಬಳಿ ಹೊದ್ದು ನಾಪಪತ್ರಸಲ್ಲಿಸಿದರು.