ಬಳ್ಳಾರಿ: ಬಳ್ಳಾರಿ ಶ್ರೀರಾಮುಲು ಬಳ್ಳಾರಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕೆಂಬ ಕನಸು ಇರುವುದರಿಂದ ಆ ಕಾರಣಕ್ಕಾಗಿ  ಬಳ್ಳಾರಿ ಉಸ್ತುವಾರಿಯನ್ನಾಗಿ ಶ್ರೀರಾಮುಲು ಅವರನ್ನು ನೇಮಿಸ ಬೇಕೆಂದು, ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.!

ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಅವಧಿಯಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಹಣೆಪಟ್ಟಿ ಕಟ್ಟಿಕೊಂಡಿದೆ. ಅಭಿವೃದ್ಧಿಯೇ ಇಲ್ಲಿನ ಜನರಿಗೆ ಗಗನ ಕುಸುಮವಾಗಿತ್ತು. ಈ ಸಂದರ್ಭದಲ್ಲಿ  ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡುವುದು ಸರಿ. ಈಗಲಾದರೂ ಶ್ರೀರಾಮುಲು ಅವರಿಗೆ ಬಿಜೆಪಿ ವರಿಷ್ಠರು ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.