ನವದೆಹಲಿ: ಮೊಳಕಾಳ್ಮೂರು ಹಾಗೂ ಬಾದಾಮಿಯಲ್ಲಿ ಎರಡು ಕಡೆ ಸ್ಪರ್ಧಿಸಿರುವ ಶ್ರೀ ರಾಮುಲು ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸುವಂತೆ ಕಾಂಗ್ರೆಸ್ ಮುಖಂಡರು ಕೇಂದ್ರ ಚುನಾವಣೆ ಆಯೋಗಕ್ಕೆ ಮನವಿಮಾಡಲಾಗಿದೆ.

ನಿನ್ನೆ ಶ್ರೀರಾಮುಲು ಸಿಜೆಐಗೆ ಲಂಚ ನೀಡುವ ಪ್ರಕರಣಕ್ಕೆ ಸಂಬಂಧಸಿದಂತೆ ವಿಡಿಯೋ ಒಂದು ಪ್ರಸಾರವಾಗಿತ್ತು. ಈ ಪ್ರಕರಣವನ್ನು ಇಟ್ಟುಕೊಂಡು ಕಾಂಗ್ರೆಸ್ ಮುಖಂಡರು ಕೇಂದ್ರ ಚುನಾವಣೆ ಆಯೋಗಕ್ಕೆ ಶ್ರೀರಾಮುಲು ಅವರನ್ನು ಸ್ಪರ್ಧೆಯಿಂದ ನಿರ್ಬಂಧಿಸುವಂತೆ ಮನವಿ ಮಾಡಿದೆ.

ಕುಟುಕು ಕಾರ್ಯಾಚರಣೆ ವಿಡಿಯೋ ಪ್ರಸಾರಕ್ಕೆ ನೀಡಿರುವ ತಡೆ ವಾಪಸ್ ಪಡೆಯುವಂತೆಯೂ ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ಮನವಿಯಲ್ಲಿ ತಿಳಿಸಲಾಗಿದೆ.