ಬೆಂಗಳೂರು:  ಹೌದು ಇನ್ನು ಮುಂದೆ ಹಸು, ಎಮ್ಮೆ, ಮೇಕೆ ಹಾಲಿನ ಡೈರಿ ತರ  ಕತ್ತೆಯ ಹಾಲಿನ ಡೈರಿ ಶುರುವಾಗಲಿದೆ.  ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್‌ಆರ್‌ಸಿಇ) ಶೀಘ್ರದಲ್ಲೇ ಹರಿಯಾಣದ ಹಿಸಾರ್‌ನಲ್ಲಿ ಕತ್ತೆ ಹಾಲಿನ ಡೈರಿಯನ್ನು ಪ್ರಾರಂಭಿಸುತ್ತಿದ್ದು, ಹಲಾರಿ ತಳಿ ಕತ್ತೆ ಸೇರಿ ವಿವಿಧ ತಳಿಗಳ ಕತ್ತೆಗಳ ಹಾಲನ್ನು ಇಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ.

ಹಲಾರಿ ತಳಿಯ ಕತ್ತೆಯ ಹಾಲು ಕ್ಯಾನ್ಸರ್, ಬೊಜ್ಜು, ಅಲರ್ಜಿ ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆಯಂತೆ.!