ಶೀತ- ಜ್ವರ ಬಂದ್ರೆ ಮನೆಯಲ್ಲಿಯೇ ಸಿಗುವ ಪದಾರ್ಥದಿಂದ ಹೇಗೆ ಉಪಶಮನಮಾಡಬಹುದು ಅಂದ್ರೆ ಧನಿಯಾ ಬೀಜ ನಿತ್ಯದ ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಒಂದು. ಧನಿಯಾ ಕೇವಲ ಅಡುಗೆಗೆ ಸೀಮಿತವಲ್ಲ. ಇದರಲ್ಲಿ ಹಲವು ಔಷಧೀಯ ಗುಣಗಳಿವೆ.

ಧನಿಯಾ ಜೊತೆ ಕಾಳು ಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಶೀತದ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಮೂಲವ್ಯಾಧಿ ಸಮಸ್ಯೆ ಇರುವವರು ಕೊತ್ತಂಬರಿ ಪುಡಿಯನ್ನು ಹಾಲಿಗೆ ಬೆರೆಸಿ ಬೆಲ್ಲ ಸೇರಿಸಿ ನಿತ್ಯ ಕುಡಿಯುವುದು ಒಳ್ಳೆಯದು. ಜ್ವರ ಬಂದರೆ ಧನಿಯಾ ಪುಡಿಯ ಜೊತೆ ಶುಂಠಿ ಹಾಗೂ ಜೇನುತುಪ್ಪ ಸೇರಿಸಿ ಸೇವಿಸಿದರೆ ಉಪಶಮನವಾಗುತ್ತದೆ.