ಬೆಂಗಳೂರು : ರಾಜ್ಯ ಸರ್ಕಾರವು ಶೀಘ್ರಲಿಪಿಕಾರರು ಮತ್ತು ಬೆರಳಚ್ಚುಗಾರರ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ನಿಯಮ ರೂಪಿಸಿ ಕರಡು ಪ್ರಕಟಿಸಿದ್ದು, ಶೀಘ್ರಲಿಪಿಕಾರರು ಹಾಗೂ ಬೆರಳಚ್ಚುಗಾರರ ಹುದ್ದೆಗಳ ಪೈಕಿ ಬೆರಳಚ್ಚುಗಾರರ ಹುದ್ದೆಗಳನ್ನು `ದತ್ತಾಂಶ’ ನಮೂದನೆ ಸಹಾಯಕರು’ ಎಂದು ಪುನರ್ ನಾಮಕರಣ ಮಾಡಲಾಗಿದೆ.

ಈ ಹಿಂದೆ ಶೀಘ್ರಲಿಪಿಕಾರರ ಹುದ್ದೆಗೆ ಪಿಯುಸಿ ಜೊತೆಗೆ ಪ್ರೌಢದರ್ಜೆ ಕನ್ನಡ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷದ ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೋಮಾದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಚೇಷ್ಠತಾಂಕದಿಂದ ಆಯ್ಕೆ ಮಾಡಲಾಗುತ್ತಿತ್ತು.

ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಈ ವಿದ್ಯಾರ್ಹತೆಗಳನ್ನು ಅರ್ಜಿ ಸಲ್ಲಿಸಲು ಮಾತ್ರ ಪರಿಗಣಿಸಲಾಗುತ್ತದೆ. ನೂತನ ಕರಡಿನಲ್ಲಿ ಶೀಘ್ರಲಿಪಿಕಾರರ ಮತ್ತು ದತ್ತಾಂಶ ನಮೂದನೆ ಸಹಾಯಕ ಹುದ್ದೆಗೆ 100 ಅಂಕಗಳ ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಉದ್ದೇಶಿಸಿದೆ.