ಬೆಂಗಳೂರು: ಶಿಕ್ಷಕರ ವರ್ಗಾವಣಾ ಕಾಯ್ದೆ 2020 ಕುರಿತು ಶಾಲಾ ಶಿಕ್ಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ರಾಜ್ಯ ಶಿಕ್ಷಕರ ಸಂಘವು ಪತ್ರ ಬರೆದಿದ್ದು, ಶಿಕ್ಷಕರ ವರ್ಗಾವಣಾ ಕಾಯ್ದೆ-2020ರ ಕೆಲ ಅಂಶಗಳಿಗೆ ತಿದ್ದುಪಡಿ ತರುವಂತೆ ಮನವಿ ಮಾಡಿದ್ದಾರೆ.

ಶೇ.25ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳಿರುವ ತಾಲೂಕಿನಿಂದ ವರ್ಗಾವಣೆ ಇಲ್ಲವೆಂಬ ಅಂಶ ಅತ್ಯಂತ ಮಾರಕವಾಗಿದ್ದು ಇದನ್ನು ಸಂಪೂರ್ಣ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.!