ಬೆಂಗಳೂರು: ಶಿಕ್ಷಕರ‌ ವರ್ಗಾವಣೆ ನಿಯಮಗಳನ್ನು ಶಿಕ್ಷಣ‌ ಇಲಾಖೆಯು ಅಂತಿಮಗೊಳಿಸಿದೆ. ಈ ಬಾರಿ ಆಗಸ್ಟ್ ನಲ್ಲಿ ಶಿಕ್ಷಕರ‌ ವರ್ಗಾವಣೆಯು ಅನುಷ್ಠಾನಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಧಿಕಾರಿಗಳ‌ ಸಭೆ‌ ನಡೆಸಿ ಕೂಡಲೇ ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.