ಬಾಗಲಕೋಟೆ: ರಾಸಲೀಲೆ ಪ್ರಕರಣ ದಲ್ಲಿ ಸಚಿವ ಸ್ಥಾನವನ್ನು ಕಳೆದುಕೊಂಡ ಶಾಸಕ ಹೆಚ್.ವೈ.ಮೇಟಿ ಅವರ ವಿರುದ್ದ ಚುನಾವಣೆಯಲ್ಲಿ ಸ್ಪರ್ಧಿಸಲು ರಾಸಲೀಲೆ ಪ್ರಕರಣದ ಸಂತ್ರಸ್ಥೆ ವಿಜಯಲಕ್ಷ್ಮಿ ಮುಂದಾಗಿದ್ದಾರೆ.

ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಜಯಲಕ್ಷ್ಮಿ .ನಾನು ಸಾಕಷ್ಟು ನೊಂದಿದ್ದೇನೆ. ನನ್ನಂತೆ ನೊಂದ ಮಹಿಳೆಯರ ಪರ ಕೆಲಸ ಮಾಡುತ್ತೇನೆ. ಜನರಿಂದಲೇ ಸಹಾಯ ಕೇಳಿ ಕಾಲುಬಿದ್ದು ಮತ ಕೇಳುತ್ತೇನೆ ಪಕ್ಷೇತರವಾಗಿ ಚುನಾವಣೆಗೆ ನಿಲ್ಲೋಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಹೋಗುವ ಮಾತಿಲ್ಲ ಅಂತ ಹೇಳಿದ್ದಾರೆ.  ನಾನು ಕುರುಬ ಸಮುದಾಯಕ್ಕೆ ಸೇರಿದವಳಾಗಿದ್ದು, ಸಮುದಾಯದ ಜನತೆ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ . ಪಕ್ಷೇತರ ಅಭ್ಯರ್ಥಿ ಆಗಿ ಕಣದಲ್ಲಿ ನಿಲ್ಲಲು ಮುಂದಾಗಿದ್ದೇನೆ ಅಂತ ಹೇಳಿದ್ದಾರೆ.