ಹರಪನಹಳ್ಳಿ; ಸುಳ್ಳು ದಾಖಲೆ ಸೃಷ್ಟಿ ಮತ್ತು ದೂರುದಾರರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ, ಪುತ್ರ ಪಿ.ಟಿ.ಭರತ್ & ಶಿಕ್ಷಕ ರಾಜ ಸೋಮಶೇಖರ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

2015ರ ಗ್ರಾ.ಪಂ. ಚುನಾವಣೆಯಲ್ಲಿ ಪರಮೇಶ್ವರ್ ನಾಯ್ಕ ಪುತ್ರ ಭರತ್ ಸ್ಪರ್ಧಿಸಲು 21 ವರ್ಷ ಆಗದ ಕಾರಣ ಜನ್ಮದಿನಾಂಕ ತಿದ್ದಿಸಿ, 21 ವರ್ಷಕ್ಕೆ ಬದಲಾಯಿಸಿಕೊಂಡು 5 ವರ್ಷ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂದು ಡಿ.ಲಿಂಬಾನಾಯ್ಕ ದೂರು ದಾಖಲಿಸಿದ್ದರು. ಹಾಗಾಗಿ ಠಾಣೆಯಲ್ಲಿ ದೂರು ದಾಖಲಾಗಿದೆ.!