ಹೊಸಪೇಟೆ : ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದಲ್ಲಿ ಹೂವಿನಹಡಗಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

ಈ ಬಗ್ಗೆ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರೇ ಕೊರೊನಾ ಸೋಂಕು ತಗುಲಿರುವುದನ್ನು ಖಚಿತಪಡಿಸಿದ್ದಾರೆ. ಜೂನ್ ತಿಂಗಳಲ್ಲಿ ಪರಮೇಶ್ವರ ನಾಯ್ಕ ಅವರ ಪುತ್ರನ ಮದುವೆಯಲ್ಲಿ ಎಸ್‌ಓಪಿ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವೂ ದಾಖಲಾಗಿತ್ತು.50 ಕ್ಕಿಂತ ಹೆಚ್ಚು ಜನ ಮದುವೆಯಲ್ಲಿ ಸೇರಬಾರದು ಎಂಬ ನಿಯಮವಿದ್ದರೂ ಶಾಸಕರು ಅದನ್ನು ಗಾಳಿಯಲ್ಲಿ ತೂರಿದ್ದರು . ಇದೀಗ ಹೂವಿನಹಡಗಲಿ ಶಾಸಕ ಪಿ . ಟಿ . ಪರಮೇಶ್ವರ ನಾಯ್ಕ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ .