ಚಿತ್ರದುರ್ಗ: ಮಾಧ್ಯಮಗಳಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಾಂಗ್ರೆಸ್ ಗೆ ಸೇರುತ್ತಾರೆ ಎಂಬ ಸುದ್ದಿ ಬರುತ್ತಿದ್ದಂತೆ, ದುರ್ಗದಲ್ಲಿ  ಚರ್ಚೆಗೆ ಗ್ರಾಸವಾಯಿತು.

ಆದ್ರೆ ಇಂದು ಶಾಸಕ ತಿಪ್ಪಾರೆಡ್ಡಿ ಸ್ವತಃ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಮಯ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಚನ್ನಾಗಿ ಬಲ್ಲೆ. ನಾನು ಮೂಲತಃ ಕಾಂಗ್ರೆಸ್ ನವನು. ಕಾಂಗ್ರೆಸ್ ನಲ್ಲಿರುವ ಗುಂಪುಗಾರಿಕೆ , ಚೇಲಾಗಿರಿ, ಬಕೆಟ್ ಹಿಡಿಯುವ ಸಂಸ್ಕೃತಿ ಚನ್ನಾಗಿ ಗೊತ್ತು. ಯಾರು ಈ ರೀತಿಯ ಸುದ್ದಿಯನ್ನು ಮಾಧ್ಯಮಗಳಲ್ಲಿ ಬರುವಂತೆ ಮಾಡಿದರು ಎಂಬುದು ಗೊತ್ತಿಲ್ಲ.

ನಾನು ವಿಧಾನ ಸಭಾ ಚುನಾವಣೆಯಲ್ಲಿ ಸೋತಾಗ ನನಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಕೆಟ್ ನೀಡಿ ನನ್ನು ಗೆಲ್ಲಿಸಿತು. ಮತ್ತೆ ನಂತರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡತು. ಹಾಗಾಗಿ ನನ್ನದು ಪಕ್ಷ ನಿಷ್ಠೆ ಎಂದು ಹೇಳಿದ ಅವರು ಈ ಬಾರಿ ವಿಧಾನಸಭಾ ಚುನವಣೆಯಲ್ಲಿ ಬಿಜೆಪಿ ಪಕ್ಷದಿಂದ ಕಣಕಿಳಿಯುತ್ತೇನೆ ಎಂದರು.