ಚಿತ್ರದುರ್ಗ : ನಿನ್ನೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪೊಲೀಸ್ ಠಾಣೆಯ ಎದುರು ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ  309 ಕೇಸ್ ದಾಖಲಾಗಿರುವ ಬೆನ್ನೆಲ್ಲೆ ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೆಲವು ಕೇಸ್ ದಾಖಲಾಗಿದೆ.

ಶಾಸಕ ಚಂದ್ರಪ್ಪರ ಮೇಲೆ ಕೇಸ್ ದಾಖಲಾಗಿರುವುದು ದುರ್ಗದ ನಗರ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 189, 504 ಹಾಗೂ 506. ಏಕೆಂದ್ರೆ ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಹಾಗಾಗಿ ಚಂದ್ರಪ್ಪರ ಮೇಲೆ ಕೇಸ್ ದಾಖಲಾಗಿದೆ.