ಹೈದರಾಬಾದ್: ಹೌದು. ದೆವ್ವ ಭೂತ ಐತೋ ಇಲ್ಲವೋ. ಆದ್ರೆ ಜನರು ಮಾತ್ರ ದೆವ್ವ ಭೂತದ ಬಗ್ಗೆ ಕತೆಕಟ್ಟಿ ಹೇಳುವುದನ್ನು ಕೇಳಿರುತ್ತೀರ ಅಲ್ವ.

ಆದ್ರೆ ಶಾಸಕರೊಬ್ಬರು ದೆವ್ವ ಭೂತದ ಬಗ್ಗೆ ಜನತೆಗೆ ಇರುವ ಮೂಡನಂಬಿಕೆಯನ್ನು ಹೋಗಲಾಡಿಸಲು ಮೂರುದಿನಗಳ ಕಾಲ ಸ್ಮಶಾನದಲ್ಲಿ ಮಲಗಿದ್ದಾರೆ.

ಪಶ್ಚಿಮ ಗೋದಾವರಿ ಕ್ಷೇತ್ರದ ಟಿಡಿಪಿ ಶಾಸಕ ನಿಮ್ಮಲ ರಾಮನಾಯ್ಡು ಅವರೇ ಈ ರೀತಿ ಸ್ಮಶಾನದಲ್ಲಿ ಮಲಗಿದವರಾಗಿದ್ದಾರೆ. ಪಲಕೊಳೆ ಸ್ಮಶಾನದಲ್ಲಿ ಅವರು ಈ ರೀತಿ ಮಲಗಿದ್ದಾರೆ.

ಪಲಕೊಳೆ ಸ್ಮಶಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ಕೈಗೊಂಡಿದ್ದರು. ಆದರೆ ಕೆಲಸಕ್ಕೆ ಯಾವುದೇ ಕಾರ್ಮಿಕರು ಬರುತ್ತಿರಲಿಲ್ಲ. ಈ ದೂರನ್ನು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಶಾಸಕರಿಗೆ ಮುಟ್ಟಿಸಿದ್ದರು. ಭಯದಿಂದ ಕಾರ್ಮಿಕರು ಕೆಲಸ ತಪ್ಪಿಸಿಕೊಳ್ಳುತ್ತಿದ್ದರು.

ಹೀಗಿರುವಾಗ ಕಾರ್ಮಿಕರು ಮತ್ತು ಜನರ ಭಯ ಹೋಗಲಾಡಿಸಲು ಸ್ವತಃ ಶಾಸಕರೇ ಸ್ಮಶಾನದಲ್ಲಿ ಮಲಗುವ ಮೂಲಕ ಮೂಡನಂಬಿಕೆ ಹೋಗಲಾಡಿಸಲು ಮುಂದಾಗಿದ್ದಾರೆ. ಇದರಿಂದ ದೆವ್ವ ಇದೆ ಅಂತ ಹೇಳುತ್ತಿದ್ದವರಿಗೆ ದೆವ್ವಕ್ಕೆ ಬೆಚ್ಚಿ ಬೀಳಿಸಿದಂತಾಯಿತಲ್ವ.!