ನವದೆಹಲಿ: ಬಿಜೆಪಿ ವಿಶ್ವಾಸಮತ ವ್ಯಕ್ತಪಡಿಸಲು ಹಲವು ದಾರಿ ಹುಡುಕಿಕೊಂಡಿದ್ದ ಮಧ್ಯೆಯೇ ನಾಳೆಯೇ ವಿಶ್ವಾಸ ಮತ ವ್ಯಕ್ತಪಡಿಸಬೇಕು ಎಂದು ಸೂಚನೆ ನೀಡಿರುವ ಸುಪ್ರೀಂ ಕೋರ್ಟ್ ಮತ್ತೊಂದು ಶಾಕ್ ಬಿಜೆಪಿಗೆ ನೀಡಿದೆ.

ಶಾಸಕರನ್ನು ಗೈರುಗೊಳಿಸುವ ಮೂಲಕ ವಿಶ್ವಾಸ ಮತ ವ್ಯಕ್ತಪಡಿಸಲು ಯತ್ನಿಸಿದ್ದ ಬಿಜೆಪಿಗೆ ದೊಡ್ಡ ಶಾಕ್ ಕೋರ್ಟ್ ನೀಡಿದೆ. ಎಲ್ಲ ಶಾಸಕರು ವಿಶ್ವಾಸಮತ ವೇಳೆ ಕಡ್ಡಾಯವಾಗಿ ಹಾಜರಾಗಬೇಕು. ಈ ಸಂಬಂಧ ರಾಜ್ಯದ ಡಿಜಿಪಿಗೆ ಸೂಚನೆ ನೀಡುತ್ತೆವೆ. ಎಲ್ಲ ರೀತಿ ಭದ್ರತೆ ಒದಗಿಸುವಂತೆಯೂ ಆದೇಶಿಸುತ್ತಿವೆ ಎಂದು ಕೋರ್ಟ್ ಸೂಚಿಸಿದೆ.

ಒಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಾದ ಪ್ರತಿವಾದ ಹಾಗೂ ಕೋರ್ಟ್ ಸೂಚನೆ ತೀವ್ರ ಕುತೂಹಲ ಕೆರಳಿದೆ.